ಗಜಲ್

ಗಜಲ್

ಜ್ಯೋತಿ ಹೊಸಕೋಟೆ

Persons Raising Hands

ನೋವುಗಳಿಂದ ಬದುಕಲು ಆಗುತ್ತಿಲ್ಲ ಸಾಕಿ
ಜವಾಬ್ದಾರಿಗಳು ಸಾಯಲು ಬಿಡುತ್ತಿಲ್ಲ ಸಾಕಿ

ಮನೆಯಾದರೇನು ಮನಸ್ಸಾದರೇನು ಗೌರವ ಇಲ್ಲದ ಮೇಲೆ
ಬೆಲೆ ಕೊಡದ ಜಾಗದಲ್ಲಿ ನಿಲ್ಲಲಾಗುತ್ತಿಲ್ಲ ಸಾಕಿ

ಮಾತಲ್ಲಿ ಹೇಳಲಾಗದಂತಾ ಅಂತರಾಳದ ಪ್ರೀತಿ
ಹೃದಯ ಕೊಟ್ಟವರಿಗೆ ಏಕೆ ತಿಳಿಯುತ್ತಿಲ್ಲ ಸಾಕಿ

ಸತ್ತ ಹೆಣಕ್ಕೆ ಮದುಮಗಳಂತೆ ಶೃಂಗಾರ ಮಾಡಿದಂತೆ
ನೆಲ ಕಚ್ಚಿದ ಸಂಬಂಧ ಉಳಿಸಲಾಗುತ್ತಿಲ್ಲ ಸಾಕಿ

“ಜ್ಯೋತಿ” ಎಷ್ಟು ಪ್ರಕಾಶಮಾನವಾಗಿ ಪ್ರಜ್ವಲಿಸಿದರೇನು
ತನ್ನವರೆಂದು ಭಾವಿಸಿದವರಿಗೆ ಬೆಳಕಿನ ಮೌಲ್ಯ ಅರಿವಾಗುತ್ತಿಲ್ಲ ಸಾಕಿ

**********************************************************

Leave a Reply

Back To Top