ಗಜಲ್

ಗಜಲ್

ಶಶಿಕಾಂತೆ

Photo of Person Holding Leaves

ಮಳೆ ಮೋಡ ಕಂಡರೆ ನವಿಲಿಗೆ ಸಂತಸ ನನಗೇನೋ ಸಂಕಟ ಆಗುತ್ತದೆ
ಸುರಿವ ಮಳೆಗೆ ಕಪ್ಪೆಗೆ ಸಂಭ್ರಮವಾದರೆ ನನಗೋ ಅಳು ಉಕ್ಕುಕ್ಕಿ ಬರುತ್ತದೆ

ರವಿಗೆ ಮಂಜುಹನಿಯನ್ನು ಕಂಡು ಇನ್ನಿಲ್ಲದ ಸಡಗರ ಹೀರಿ ಕುಡಿಯಲು
ಬೆಳಬೆಳಗ್ಗೆ ಇಬ್ಬನಿ ಮೈ ಸೋಕಿದಾಗ ನೀ ಜೊತೆಗಿಲ್ಲದ್ದು ಬೇಸರ ಎನಿಸುತ್ತದೆ

ಕತ್ತಲಲ್ಲಿ ಮಿಂಚು ಹೊಡೆದು ಬೆಳಕಾಗ ಹಾಗೆ ನಿನ್ನ ಮಾತು ಹಿತವೆನಿಸುತ್ತಿತ್ತು
ಈಗೀಗ ದಟ್ಟ ಕಾರಿರುಳ ಕತ್ತಲಲ್ಲಿ ನಿನ್ನ ಧ್ಯಾನ ಮನಸಿಗೆ ಸುಖ ನೀಡುತ್ತದೆ.

ನಾ ಮಲ್ಲಿಗೆ ಮುಡಿದು ಬಂದಾಗ ನೀ ಮರುಳಾಗಿ ನನ್ನ ನಶೆ ಏರುತ್ತಿತ್ತು ನಿನಗೆ
ಮಲ್ಲಿಗೆ ಫಮ ಹೊತ್ತು ತರುತಿದೆ ತಂಗಾಳಿ ಮನದ ನೆಮ್ಮದಿಯನ್ನು ಕೆಡಿಸುತ್ತದೆ

ಬೆಳಕು ಬೀರುತ್ತಿದ್ದ ಚಂದ್ರ ಕಾಣದಾದಾಗ ಬೆಚ್ಚುತ್ತಿದ್ದ ನನ್ನನ್ನು ಅಪ್ಪಿ ಸಂತೈಸುತ್ತಿದ್ದೆ
ಶಶಿಯ ನಗುವ ಮೊಗವ ಕಂಡಾಗಲೆಲ್ಲಾ ನಿನ್ನ ನೆನಪು ಹೃದಯವನು ಹಿಂಡುತ್ತದೆ+*…

********

5 thoughts on “ಗಜಲ್

  1. ಹೃದಯದ ನೋವು ಕವಿತೆಯಾಗಿ ಅಭಿವ್ಯಕ್ತ ಗೊಳ್ಳುವ ಪರಿ ಚಂದವಿದೆ
    ಅಭಿನಂದನೆ ಮೆಡಮ್
    ಅಭಿನಂದನೆ ಸಂಪಾದಕರಿಗೆ

  2. ತುಂಬು ಹೃದಯದ ಧನ್ಯವಾದಗಳು ಸರ್.ನಿಮ್ಮ ಮನ ತುಂಬಿ ಬಂದ ಮಾತುಗಳಿಗೆ..

    1. ತುಂಬು ಹೃದಯದ ಧನ್ಯವಾದಗಳು ಮೇಡಂ/ಸರ್..ನಿಮ್ಮ ಹೃದಯ ತುಂಬಿ ಬಂದ ಮಾತುಗಳಿಗೆ.

Leave a Reply

Back To Top