ಅಪಾತ್ರ ದಾನ

ಕವಿತೆ

ಅಪಾತ್ರ ದಾನ

ಎಂ. ಆರ್. ಅನಸೂಯ

Photo of Abstract Painting

ಬಿತ್ತಿದರೆ ಕಾಳೊಂದ
ಸಾಸಿರ ಕಾಳನೀಯುವ
ಭೂತಾಯಿ ಜಗದ ಆನ್ನದಾನಿ !

ಕೊಡದೆ ಒಂದೊಂದೇ ಹನಿಯ
ಅಗಣಿತ ಹನಿಗಳ ಸುರಿವ
ಆಕಾಶ ಕೊಡುಗೈ ಜಲದಾನಿ !

ತರತಮವಿಲ್ಲದೆ ಏಕಕಾಲಕೆ
ಜೀವ ಚೈತನ್ಯ ಬೆಳಕು ಬಿಸಿಲನೀವ
ಭಾಸ್ಕರ ಸಹೃದಯಿ ಬೆಳಕದಾನಿ !

ಸೇವಿಸಿ ಮಲಿನ ಗಾಳಿಯ
ಪಾವನ ಪ್ರಾಣವಾಯುವೀವ
ಹಸಿರ ವನಸಿರಿ ಜೀವದಾನಿ !

ದಕ್ಕಿಸಿಕೊಂಡು ದಾನವನೆಲ್ಲ
ದಾನವನಂತೆ ಬೀಗುವ
ಮನುಜ ಕೃತಘ್ನ ಮತಿಹೀನಿ !

*********************************

Leave a Reply

Back To Top