ನಿರುತ್ತರ

ಪುಸ್ತಕ ಸಂಗಾತಿ

ಒಂದೇ ಗುಟುಕಿಗೆ ಅಮಲೇರುವ ಕಾವ್ಯ

ಅರಿವಿನ ಹರಿಗೋಲು ಮೂಲಕ ಕಾವ್ಯದ ಪಯಣ ಆರಂಭಿಸಿದ ಕೆ‌.ಬಿ.ವೀರಲಿಂಗನಗೌಡರು ಹಲವು ಅಗ್ನಿದಿವ್ಯ ಗಳನ್ನು ದಾಟಿಕೊಂಡು ಬಂದಿರುವವರು ಸದ್ಯ ಸಾಸಿವೆಯೊಳಗೆ ಸಾಗರ ಕಾಣುವ ಅವರ ಕವಿತೆಗಳು ಹುಸಿ ಲೋಕದ ವರ್ತಮಾನದ ತಲ್ಲಣಗಳಿಗೆ ಮುಖಾಮುಖಿಯಾಗುತ್ತವೆ ಹೇಳುವ ಸಾಲು ಎರಡಾದರೂ ದೀರ್ಘ ಕವಿತೆಯ ಎಲ್ಲ ಕಸುವನ್ನು ಆ ಸಾಲುಗಳಲ್ಲಿ ತುಂಬಿದ್ದಾರೆ, ಅಕ್ಕನಿಗೆ ಚನ್ನಮಲ್ಲಿಕಾರ್ಜುನನಂತೆ ,ಕೆ.ಬಿ ಅವರು ‘ಸಾಕಿ’ ಎನ್ನುವ ತಮ್ಮ ಆತ್ಮಸಂಗಾತದ ದನಿಯನ್ನು ನಿವೇದಿಸಿಕೊಳ್ಳುವ ಮುಖೇನ ಲೋಕಕ್ಕೆ ಹೇಳಬೇಕಾದ ಎಲ್ಲ ಸಂಕಟಗಳ ದ್ರವ್ಯ ಕಾವ್ಯದಲ್ಲಿ ಅಡಗಿದೆ

ಬಯಲ ಹದಗೊಳಿಸಿ ಪ್ರೀತಿಯನ್ನು ಹರಡುವ ಸಂತನಂತೆ ಕಾಣುತ್ತಾರೆ
ಸಾಕಿ ಪ್ರೀತಿಯೆಂದರೆ/ ಗುಟ್ಟಾಗಿ ಗುನುಗುವುದಲ್ಲ/ಸುಟ್ಟ ರೊಟ್ಟಿಯಂತಾಗುವುದು ಎನ್ನುವಲ್ಲಿ ಪ್ರೀತಿಗಿರಬೇಕಾದ ಗಟ್ಟಿತನ,ಸುಟ್ಟ ರೊಟ್ಟಿಯ ಅನುಭವ ದ್ರವ್ಯ,ಪ್ರೀತಿ ,ರೊಟ್ಟಿ ಎನ್ನುವುದು ಸದ್ಯದ ತುರ್ತು, ಮಾನವತೆಯ ಬದುಕಿನ ಪ್ರತೀಕ ಕೆ.ಬಿ ಅವರ ಕಾವ್ಯದ ಗಟ್ಟಿ ನಿಲುವಿನ ಉತ್ತರವಾಗಿದೆ

ಪ್ರೀತಿಯ ಶಕ್ತಿ ಅದು ಅಸ್ಸೀಮ ಬಯಲು ಅಕ್ಕ ಹೇಳಿದಂತೆ ಸೀಮಿಯಲ್ಲಿದ ನಿಸ್ಸಿಮಂಗೆ ಒಲಿದನವ್ವಂತೆ,ಪಿನಿಕ್ಸ ಹಕ್ಕಿಯಂತಾಗುವುದು,ಶರಣಾಗುವುದಲ್ಲ,ಶರಣ ಸಂಸ್ಕೃತಿಗೆ ಅಣೆಯಾಗುತ್ತಾರೆ ಪ್ರೀತಿಯಂತೆ ಮುದ್ದಾಡುವುದಲ್ಲ ಕಾವ್ಯದ ಕೊನೆಯಲ್ಲಿ ಹೇಳುವ ಮಾತ್ರ ಅಲೌಕಿಕತೆಯೆಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ” ಎದ್ದು ಹೋಗಿ ಬುದ್ಧನಾಗುವುದು ಎನ್ನುವಲ್ಲಿ ಕಾವ್ಯವನ್ನು ಗರಡಿ ಮನೆಗೆ ಕರೆತರುತ್ತಾರೆ
ಸಾಕಿ /ಕುಡಿಯುತ್ತಿದ್ದೇನೆ/ನಿರುತ್ತರದಲಿ ಕುಳಿತು/ಅಮೂರ್ತ ಅರ್ಥವಾಗದ್ದಕ್ಕೆ

ಕವಿ ಸಾಕಿಗೆ ನಿವೇದಿಸಿಕೊಳ್ಳುವುದು , ಕುಡಿಯುವುದು ಏಕೆ ಅಂದರೆ ಅಮೂರ್ತ ಅರ್ಥವಾಗದ್ದಕ್ಕೆ,ಎಲ್ಲರ ಹುಡುಕಾಟವೂ ಅಮೂರ್ತ ವೇ ಎಷ್ಟೂ ಅರೆದು, ಮುರಿದು,ತೊರೆದು,ಕರಗಿ,ಮರುಗಿದರು ಅದು ಇನ್ನೂ ಮುಖಾಮುಖಿಯಾಗಿಲ್ಲ ಅಮೂರ್ತ ವನ್ನು ಮೂರ್ತವಾಗಿಸುವುದು ಕವಿಯೇ ಹೇಳಿದಂತೆ ಪ್ರೇಮವನ್ನು ಕುಡಿಯಬೇಕಾಗಿದೆ ಅದು ಲೋಕವನ್ನು ತಿಳಿಗೊಳಿಸುತ್ತದೆ ಸಾಕಿ/ ಕವಿತೆಯೆಂದರೆ/ಬೆಳೆಯುವುದಲ್ಲ/ ಬೇರಾಗಿ ಕೆಳಗಿಳಿಯುವುದು

ಸಾಕಿ/ಕವಿತೆಯೆಂದರೆ/ ಹೊಸೆಯುವುದಲ್ಲ/ಒಲವ ಬೆಸೆಯುವುದು

ಕವಿ ಎಲ್ಲಿಯೂ ಈ ಪ್ರೇಮವನ್ನು ಬಿಟ್ಟಿಲ್ಲ ಎಲ್ಲಿ ಪ್ರೇಮವನ್ನು ತೊರೆಯುತ್ತವೆಯೊ ಅಲ್ಲಿ ಅಶಾಂತಿ ,ಯುದ್ಧ ಕ್ಕೆ ದಾರಿಯಾಗುತ್ತದೆ ಎನ್ನುವ ಎಚ್ಚರಿಕೆಯನ್ನಿಟ್ಟುಕೊಂಡೆ ಒಲವ ಬೆಸೆಯಲು ಹಡದಿ ಹಾಸುತ್ತಾರೆ ಬಯಲ ಹಣತೆಯೆದುರು ಕತ್ತಲೆಯನ್ನೇ ಬೆತ್ತಲಾಗಿಸುತ್ತಾರೆ
ಒಲವಿನೆದುರು ಕನಸನ್ನು ಶುಚಿಗೊಳಿಸುತ್ತಾರೆ
********************************

ಹೆಬಸೂರ ರಂಜಾನ್

3 thoughts on “ನಿರುತ್ತರ

  1. ಕೆ.ಬಿ.ವೀರಲಿಂಗನಗೌಡ್ರ ನಮ್ಮ ನಡುವಿನ ಸಶಕ್ತ ಬಂಡಾಯದ ದನಿ..ಅವರ ಬೊಗಸೆಯಲ್ಲಿ ಸಾಗರ ತುಂಬುವ ಹನಿ ಹನಿ ಕವಿತೆಗಳು ಬೆರಗು ಹುಟ್ಟಿಸುತ್ತವೆ. ಇವರ ಕವಿತೆಗಳು ವರ್ತಮಾನದ ವಿಷಾದ ಬಿಂಬಿಸುವ ಕೆಲಸವನ್ನಷ್ಟೇ ಮಾಡುವುದಿಲ್ಲ,
    ಭವಿಷ್ಯದ ಬೆಳಕಿನ ದಾರಿ ತೋರುವ , ಸತ್ಯದ ಟಾರ್ಚು ಆಗಿಯೂ ಕೆಲಸ ಮಾಡುತ್ತವೆ..ಕೆ.ಬಿ.ಯವರನ್ನು ಪರಿಚಯಿಸಿದ ರಮಜಾನರಿಗೆ ಧನ್ಯವಾದಗಳು.

Leave a Reply

Back To Top