Category: ನಿಮ್ಮೊಂದಿಗೆ

ನಿಮ್ಮೊಂದಿಗೆ

ಮನದ ಪುಟದಲಿ ಮುದ್ರೆಯೊತ್ತಿದ ಕಾದಂಬರಿ.

ಕಳೆದ ಎರಡು ,ಮೂರು ವರ್ಷಗಳಿಂದ ಕೊಡಗು ಮಹಾಮಳೆಯಿಂದ ತತ್ತರಿಸಿ ಎದುರಿಸಿದ ಜೀವಭಯವನ್ನೂ,ಕರಾಳ ದಿನಗಳನ್ನೂ ಕಾದಂಬರಿಯೊಳಗೆ ಹಿಡಿದಿಟ್ಟಿರುವುದು ನಿಜಕ್ಕೂ ವರ್ತಮಾನಕ್ಕೆ ಹಿಡಿದ ಕನ್ನಡಿ.

ಭಾವ ಭುವನ

ಕವಿತೆ ಭಾವ ಭುವನ ಕಲಾ ಭಾಗ್ವತ್ ಕಾದ ನೆಲದ ಮೌನಮಡುಗಟ್ಟಿ ಮಳೆ ಸುರಿವಾಗಹೊಳಹು ಕೊಟ್ಟು ಹಾಯುವ ಮಿಂಚಿಗೆಒಮ್ಮೆ ನಿಂತು ಏನೆಂದು ಕೇಳಬಾರದೆ? ಹರಿವ ನದಿಯೊಡನೆ ಸೇರಿದ ಹನಿ ಮುತ್ತುಅಲೆ ಅಲೆಯಾಗಿ…ಹರಿವ ಮುಸ್ಸಂಜೆಗೆಮೆರುಗು ನೀಡಿ ಜಾರುವ ರಂಗಿಗೆಒಮ್ಮೆ ನಿಂತು ಪಿಸುಮಾತ ಆಲಿಸಬಾರದೇ? ಮೌನ ಮಥಿಸಿ ಪಕ್ವವಾಗಿದೆ ಈಗಮತ್ತೆಲ್ಲವೂ ಮುಚ್ಚಿಕೊಂಡಿದೆಶಿಶಿರದ ಇರುಳಿನಲಿ…ತಣ್ಣನೆ ಬಿಚ್ಚಿದೆ ಮನ ಮಾತ್ರಮುಂಜಾವು ಎಂದಿಗಿಂತಲೂ ಆರ್ದೃಬೆಚ್ಚಗೆ ಸಿಹಿಯ ಸವಿ ದೂರದಲ್ಲೇ ನಿಂತುಕಡಲ ತೆರೆಗಳ ಸೆಳೆವಾಗಹೊಳೆವ ಮುಖದಲ್ಲಿ ಅರಳುವಕನಸುಗಳು ನನಗಷ್ಟೇ ಸೀಮಿತವೀಗಬಿಗುಮಾನವೆನಗೆ ಇದಕ್ಕೆಲ್ಲ ಉತ್ತರವಹುಡುಕಲಾಗದು ನನಗೆಹುದುಗಿರುವ ಮಾತುಗಳುಸುಲಭದಲಿ ಅರ್ಥಕ್ಕೆ […]

ಕಸಾಪ ಅದ್ಯಕ್ಷಸ್ಥಾನದ ಅಭ್ಯರ್ಥಿಗಳಿಗಷ್ಟು ಪ್ರಶ್ನೆಗಳು!

ಸಂಪಾದಕೀಯ ಕಸಾಪ ಅದ್ಯಕ್ಷಸ್ಥಾನದ ಅಭ್ಯರ್ಥಿಗಳಿಗಷ್ಟು ಪ್ರಶ್ನೆಗಳು! ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಸ್ಥಾನದ  ಅಭ್ಯರ್ಥಿಗ ಳಿಗೊಂದಿಷ್ಟು ಪ್ರಶ್ನೆಗಳು!              ಇನ್ನು ಕೆಲವೆ ತಿಂಗಳುಗಳಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ  ಅದ್ಯಕ್ಷ ಸ್ಥಾನಕ್ಕೆ ತಾವುಗಳು ಆಕಾಂಕ್ಷಿಗಳಾಗಿದ್ದು, ಖಾಸಗಿಯಾಗಿ ತಮ್ಮ ಆಪ್ತವಲಯದ ಮೂಲಕ ಸದ್ದಿರದೆ ಪ್ರಚಾರ ಕಾರ್ಯವನ್ನೂ ಶುರು ಮಾಡಿರುತ್ತೀರಿ. ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ  ಈ ನೆಲದಲ್ಲಿ ಇಂತಹ ಆಕಾಂಕ್ಷೆಗಳು- ಸಂಬಂಧಿಸಿದ ಪೂರ್ವ ಸಿದ್ದತೆಗಳು ಸಹಜವೇ ಸರಿ! ಈ ಬಗ್ಗೆ ನಮ್ಮ ತಕರಾರೆನಿಲ್ಲ. ಆದರೆ ಹಲವು ವರ್ಷಗಳಿಂದ ಈ […]

ಕೊರೆವ ನಡುಕವಂತೆ!

ಕವಿತೆ ಕೊರೆವ ನಡುಕವಂತೆ! ಸುವಿಧಾ ಹಡಿನಬಾಳ ಅವನ್ಯಾವನೊ ತಲೆಕಟ್ಟ ಸ್ವಾಮಿಯಂತೆಸ್ವಯಂ ಘೋಷಿತ ದೇವ ಮಾನವನಂತೆಬಿತ್ತಿದ ಇವರ ತಲೆಯಲಿ ಮೌಢ್ಯದ ಕಂತೆಕಲಿಯುಗದ ಅಂತ್ಯವಂತೆ ಸತ್ಯ ಯುಗದ ಆರಂಭವಂತೆಅದಕೆ ಮಾಡಬೇಕು ಮಕ್ಕಳ ಬಲಿದಾನವಂತೆ ಮುಠ್ಠಾಳ ತಾಯಿಯಿಂದಲೇ ಕುಡಿಗಳ ಕಗ್ಗೊಲೆಯಂತೆಇದಕೆ ತಂದೆಯ ಮೌನ ಸಾಥ್ ಅಂತೆಹೆಣಗಳ ಬಾಯಲಿ ಕಲಶ ಹೂಡಿದ್ದರಂತೆ!!ಮರುದಿನ ಮಕ್ಕಳ ಮರುಹುಟ್ಟಿಗೆ ಕಾದರಂತೆಮರಣೋತ್ತರ ಪರೀಕ್ಷೆಗೆ ಪ್ರತಿರೋಧವಂತೆ ಆ ತಾಯಿ ಬೇರೆ ಗೋಲ್ಡ್ ಮೆಡಲಿಸ್ಟಂತೆ!!!ಮಕ್ಕಳೂ ಡಿಗ್ರಿ ಮೆಟ್ಡಿಲೇರಿದ್ದವಂತೆಪಕ್ಕಾ ಇವರೆಲ್ಲರ ತಲೆಯೆಂಬುದು ಅಜ್ಞಾನದ ಬೊಂತೆಎತ್ತ ಸಾಗುತ್ತಿದೆ ವಿದ್ಯೆ ವಿಜ್ಞಾನ ಎಂಬ ಚಿಂತೆಕೇಳಿದವರ ಎದೆಯಲಿ […]

ಮೌನ ಹನಿಗಳು

ಕವಿತೆ ಮೌನ ಹನಿಗಳು ಸುಧಾ ಎನ್.ತೇಲ್ಕರ್ ೧ಹೊಂದಿಕೆಯಿರದ ಭಾವಗಳಲಿಮಾತು ಮದ್ದಳೆ ಬಾರಿಸಿತ್ತುಉಸಿರು ಬಿಗಿ ಹಿಡಿದ ಮೌನಸದ್ದಿಲ್ಲದೆ ಪಟ್ಟು ಬಿಗಿದಿತ್ತು ೨ಮೌನದ ಕಪ್ಪೆ ಚಿಪ್ಪಲ್ಲಿ ಅಡಗಿತ್ತುಮಾತಿನ ಸ್ವಾತಿ ಮುತ್ತುಕಣ್ರೆಪ್ಪೆಯಲಿ ಜಾರದೆ ಕುಳಿತಿತ್ತುಮಡುಗಟ್ಟಿದ ಹನಿ ಮುತ್ತು ೩ಮಾತಿನ ಚೂರಿ ಮೊನಚಿಗೆಹೃದಯ ರಕ್ತ ಒಸರಿತ್ತುನಿಟ್ಟುಸಿರಿನ ಮೌನವೇಗಾಯಕ್ಕೆ ಮುಲಾಮು ಸವರಿತ್ತು ೪ಮಾತು ಕಲಹದ ಹೊನಲಾಗಿಹರಿದಿತ್ತುಮೌನವೇ ಅದರ ರಭಸಕೆಆಣೆಕಟ್ಟು ಹಾಕಿತ್ತು ೫ಬೆಳ್ಳಿ ನುಡಿಗಳುತುಂಬಿದ್ದ ಖಜಾನೆಗೆಹಾಕಿತ್ತು ಚಿನ್ನದಮೌನದ ಬೀಗ ********************

ಅಕ್ಷರದ ಅವ್ವ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ

ಲೇಖನ ಅಕ್ಷರದ ಅವ್ವ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಡಾ.ಸುಜಾತಾ.ಸಿ.                                     “ನೀನು ನಂಗೊAದು ರೊಟ್ಟಿ ಕೊಟ್ರೆ                                     ಒಂದು ದಿವ್ಸ ಹಸಿವನ್ನ ತೀರಿಸ್ದಂಗೆ                                     ರೊಟ್ಟಿಗಳಿಸೋದು ಹೆಂಗೇAತ ಕಲಿಸಿದ್ರೆ                                     ಗಳಿಸೋ ಅವಕಾಶ ಕಿತ್ಕಳೋ ತಂಕ                                     ನನ್ನ ಹಸಿವನ್ನ ತೀರ್ಸಿದಂಗೆ                                     ಅದೇ ನಿನೇನಾದ್ರೂ ವಿದ್ಯೆ ಕಲ್ಸಿ                                     ಒಗ್ಗಟ್ಟಾಗಿ ಹೋರಾಡೋದು ಕಲ್ಸಿದ್ಯಾ?                                     ಏನ್ಬೇಕಾದ್ರೂ ಆಗ್ಲಿ, ಯಾವ ಕಷ್ಟನಾದ್ರೂ ಬರಲಿ                                     ಎಲ್ಲ ಒಟ್ ಸೇರಿ                                     ನಮ್ ದಾರಿ ನಾವು […]

ರಿಂಗಣ

ಕವಿತೆ ರಿಂಗಣ ನೀ. ಶ್ರೀಶೈಲ ಹುಲ್ಲೂರು ವಿರಮಿಸದ ಮನವೆ ನೀನುರಮಿಸಬೇಡ ಹೀಗೆ ನನ್ನಕೆನ್ನೆ ತಟ್ಟಿ ತುಟಿಯ ಮುಟ್ಟಿಹೇಳಬೇಡ ‘ನೀನೆ ಚೆನ್ನ’ ಏಕೆ ಹೀಗೆ ಲಲ್ಲೆಗರೆವೆ ?ಮೆಲು ದನಿಯಲಿ ನನ್ನ ಕರೆವೆನಿನ್ನ ಬಳಿಗೆ ಬರುವೆ ನಾನುಒಲವ ತೋರಿ ನನ್ನೆ ಮರೆವೆ ಬಾನ ದಾರಿಗುಂಟ ನಡೆವೆನಿನ್ನ ತೋಳ ಮೇಳದಲ್ಲಿಚಂದ್ರ ತಾರೆ ಹಿಡಿದು ತರುವೆಕಣ್ಣ ಬಿಂಬದಾಳದಲ್ಲಿ ನಭಕು ನೆಲಕು ಸೆರಗ ಹಾಸಿಚುಕ್ಕಿ ಚಿತ್ರ ಬರೆವೆ ನಾನುನನ್ನ ಅಂದ ಕಂಡು ಹಿಗ್ಗಿಹೊತ್ತು ಒಯ್ವೆ ನನ್ನ ನೀನು ಹೀಗೆ ಇರಲಿ ನಮ್ಮ ಒಲವುಸುರಿಸುತಿರಲಿ ಜೇನು […]

ಗಜಲ್

ಗಜಲ್ ಸ್ಮಿತಾ ಭಟ್ ಬೇಕೋ ಬೇಡವೋ ಈ ಬದುಕನ್ನು ನಡೆದೇ ಮುಗಿಸಬೇಕಿದೆ.ಕಾಲದ ಕಡುದಾರಿಯ ಕಳವಳಿಸದೇ ಮುಗಿಸಬೇಕಿದೆ ಉಯ್ಯಾಲೆ ಕಟ್ಟಿದ ರೆಂಬೆಯ ಮೇಲೆ ಅದೆಷ್ಟು ನಂಬಿಕೆಎರಗುವ ನಸೀಬನ್ನು ಎದೆಗುಂದದೇ ಮುಗಿಸಬೇಕಿದೆ. ಸುತ್ತಿ ಬಳಸುವ ದಾರಿಯಲಿ ಕಾಲಕಸುವು ಕಳೆಯದೇ ಇರದುಸಿಗದ ನೂರು ಬಯಕೆ ಕನಸನು ಕೊರಗದೇ ಮುಗಿಸಬೇಕಿದೆ. ಮೋಡ ಎಲ್ಲವನ್ನೂ ಶೂನ್ಯಗೊಳಿಸುವುದು ಕೆಲವೊಮ್ಮೆಮೆತ್ತಿಕೊಳ್ಳುವ ನೋವನು ಅಳುಕದೇ ಮುಗಿಸಬೇಕಿದೆ. ಹಿಂತಿರುಗಿದಾಗ ಎಷ್ಟೊಂದು ಏರಿಳಿತಗಳು ಬದುಕಿಗೆಯಾವ ಕಹಿಯನೂ ಉಳಿಸಿಕೊಳ್ಳದೇ ಮುಗಿಸಬೇಕಿದೆ. ರೆಕ್ಕೆ ಕಟ್ಟಿಕೊಂಡಾಗ ಜಗವದೆಷ್ಟು ಸೋಜಿಗ “ಮಾಧವ”ಈ ಖುಷಿಗೆ ಯಾರ ಹಂಗು,ವಿಷಾದವಿರದೇ ಮುಗಿಸಬೇಕಿದೆ […]

ಶರದದ ಹಗಲಲ್ಲಿ ಆಷಾಢದ ಮೋಡಗಳು…

ಶರದದ ಹಗಲಲ್ಲಿ ಆಷಾಢದ ಮೋಡಗಳು… ಎಂ.ಆರ್.ಕಮಲ ಹೊರಗಿನ ಋತುಮಾನಕ್ಕೂ ಒಳಗಿನ ಋತುಮಾನಕ್ಕೂ ಸಂಬಂಧವಿದೆಯೇ ಎಂದು ಹಲವಷ್ಟು ಬಾರಿ ಯೋಚಿಸಿದ್ದೇನೆ. ಇದೆ ಎನ್ನುವುದು ನಿಜವಾದರೂ ಪೂರ್ಣಸತ್ಯವಲ್ಲ. ಬಯಲು ಸೀಮೆಯ ಬಿರುಬಿಸಿಲಲ್ಲಿ ಬೆಳೆದ ನನ್ನಂಥವರು ಬಾಯಿಯಲ್ಲಿ ಕೆಂಡವನ್ನೇ ಕಾರುತ್ತೇವೆ. ವಿನಾಕಾರಣ ಉದ್ವಿಗ್ನಗೊಂಡು. ಸಣ್ಣ ಸಣ್ಣ ವಿಷಯಕ್ಕೆಲ್ಲ ಜಗಳ ತೆಗೆಯುತ್ತೇವೆ. ಬಯಲು ಸೀಮೆಯ ಹೆಚ್ಚಿನ ಜನರ ಬೆಳಗುಗಳು ಗುದ್ದಾಟಗಳಿಂದಲೇ  ಆರಂಭವಾಗುತ್ತದೆ. ವಸಂತನೇ ಬರಲಿ, ಗಿಡಮರಗಳು ಚಿಗುರುತ್ತಲೇ ಇರಲಿ, ಹೂವುಗಳು ತೂಗುತ್ತಲೇ ಇರಲಿ ಬೇಸಗೆಯ ಬಿರುಬಿಸಿಲಂಥ ಚಡಪಡಿಕೆ ಮಾತ್ರ ನಿಲ್ಲುವುದೇ ಇಲ್ಲ. ಆಷಾಢದ […]

Back To Top